Thursday, December 22, 2011

ಮೂಕಜ್ಜಿಯ ಕನಸುಗಳು - Mookajjiya kanasugalu

ಮೂಕಜ್ಜಿಯ ಕನಸುಗಳನ್ನು ಒಂದು ಕಾದಂಬರಿಯೆಂದು ಓದದೇ, ಅದನ್ನು ಒಂದು ಮನುಕುಲದ ವಿಮರ್ಶೆ ಅಂತ ಓದಿದರೆ ಅದು ಚೆನ್ನಾಗಿ ಅರ್ಥವಾಗುತ್ತದೆ. ಇಲ್ಲಿ ಕಥೆಯಿದೆ ಆದರೆ ಅದಕ್ಕಿಂತ ಹೆಚ್ಚಾಗಿ ಮಾನವನ ವಿಕಾಸವಾದವೂ ಇದೆ. ಆದಿ ಮಾನವ, ಧಾರ್ಮಿಕ ಘರ್ಷಣೆ, ಅಘೋರಿ, ಬೌದ್ಧ, ಜೈನರ ಆಗಮನ ಮತ್ತು ಬೆಳವಣಿಗೆ ಎಲ್ಲವೂ ಇದೆ. ಭಾರತದ ಚರಿತ್ರೆಯನ್ನು ಒಂದು ಹಳ್ಳಿಯ ಮೂಲಕ ಮೆಲಕು ಹಾಕಿದ್ದಾರೆ. ದೇವರಿಂದ ಮಾನವನೋ ಅಥವಾ ಮಾನವನಿಂದ ದೇವರೋ ಎಂಬ ಆಧ್ಯಾತ್ಮಿಕ  ಚರ್ಚೆ ಕೂಡ ಇದೆ. ಪುಸ್ತಕದ ಹೆಸರು ಹೇಳುವಂತೆ ಅಜ್ಜಿಯೂ ಮೂಕಿಯೂ ಅಲ್ಲ ಅವಳು ರಾತ್ರಿ ಮಲಗಿದಾಗ ಕಾಣುವ ಕನಸುಗಳ್ಳನ್ನು ಹೇಳುವದು ಇಲ್ಲ. ಅಜ್ಜಿಗೆ ಒಂದು ಅದ್ಭುತ ಶಕ್ತಿಯಿದ್ದು ಅವಳು ಹಿಂದೆ ಆದದ್ದು, ಮುಂದೆ ಆಗುವದನ್ನು ಕಾಣುತಿರುತ್ತಾಳೆ. ಈ ಹೊತ್ತಿಗೆ ಕನ್ನಡದ ಅದ್ಭುತ ಕೃತಿ, ಎಲ್ಲರೂ ಓದಲೇ ಬೇಕಾದದ್ದು. ಕಾದಂಬರಿಯಲ್ಲಿ ಮೂಡಿದ ಕೆಲವು ವಿಶಿಷ್ಟ ಸಾಲುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.



ಹೆಂಡತಿ ಮಕ್ಕಳನ್ನು ಬಿಟ್ಟರು ದಾಸರು.
ವಿಠಲನನ್ನು ನಾರಾಯಣನನ್ನು ನಂಬಿ ಹಾಡಿದರು.
ನಂಬಿದ್ದೇ ನಂಬಿದ್ದು; ಹಾಡಿದ್ದೇ ಹಾಡಿದ್ದು.
ಅವರು ತಮ್ಮ ಹೆಂಡಿರನ್ನು ದಾರಿ ಮೇಲೆ ಕೆಡೆದು ಹೋದದ್ದು ನಿಜ.
ಹಾಗೆ ಮಾಡಿ ಬೇಡಿದ್ದು ಯಾರನ್ನು?
ತಂತಮ್ಮ ಹೆಂಡಿರೊಡನೆ ಸುಖವಾಗಿ ವೈಕುಂಠದಲ್ಲೋ, ಕೈಲಾಸದಲ್ಲೋ ಇರುವಂಥ ವಿಷ್ಣುವನ್ನು, ಶಿವನನ್ನು.
ಅವರೇನು ಕೊಟ್ಟಾರು? ಅವರಿಗೂ ಅವರ ಹೆಂಡಂದಿರಿಂದ ಮುಕ್ತಿ ಸಿಗದೇ ಇರುವಾಗ?

                                                                                         ~ ಕಡಲ ತೀರದ ಭಾರ್ಗವ
~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~

"ಹೆರುವುದು ಅಸಹ್ಯವಲ್ಲ; ಇರುವುದು ಅಸಹ್ಯವಲ್ಲ; ಸಾಯೂವುದು ಅಲ್ಲ, ಹುಟ್ಟಿಸುವುದು ಅಸಹ್ಯವೇ?
ಗಂಡು ಹೆಣ್ಣುಗಳನ್ನು ಒಟ್ಟಿಗೆ ಬೆಸೆದು, ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಸುಖಕ್ಕೋ, ದು:ಖಕ್ಕೋ ಒಂದುಗೂಡಿಸುವ ಶಕ್ತಿ ಅಸಹ್ಯವೇ? "

                                                                                         ~ ಮೂಕಜ್ಜಿಯ ಪ್ರಶ್ನೆ

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~


ಮನಸ್ಸಿಗೆ ಮರೆಯುವಂಥ ಗುಣ ಇದೆ. ದು:ಖದ ಸ್ಮರಣೆಗಳಿಂದ ಜೀವನ ಜೀವಂತ ನರಕವಾಗಬಾರದು ಎಂಬುದಕ್ಕೇ ಮರೆವೂ ಎಂಬುದನ್ನು ಅನುಗ್ರಹ ಮಾಡಿದೆ ನಿಸರ್ಗ.
                                                                                           ~ ಶಿವರಾಮ ಕಾರಂತ





No comments:

Post a Comment