Monday, August 12, 2013

ದೇವಸ್ಥಾನದ ಸುತ್ತ ಮೂರನೆಯ ಪ್ರದಕ್ಷಿಣೆ

ಮೂರನೆಯ ಪ್ರದಕ್ಷಿಣೆಯಲ್ಲಿ ಹೇಳುವದೆನೆಂದರೆ ನಾನು ದೇವಸ್ಥಾನಕ್ಕೆ ಹೋಗುವುದು ಸ್ವಲ್ಪ ಕಡಿಮೆಯೆ. ನಾನ್ಯಾಕೆ ದೇವಸ್ಥಾನಕ್ಕೆ ಹೆಚ್ಚು ಹೋಗುವದಿಲ್ಲ ಅನ್ನುವುದೇ ನನ್ನ ಮೂರನೆಯ ವಿಷಯ. ನಾವು ದೇವಸ್ಥಾನಕ್ಕೆ ಹೋಗದೆಯಿರುವದು ಹಿಂದೂ ಧರ್ಮದ ದೌರ್ಬಲ್ಯವೋ ಅಥವಾ ವಿಶೇಷತೆಯೋ ನನಗೆ ತಿಳಿದಿಲ್ಲ. ತಿಳಿದವರು ನನಗೆ ಸ್ವಲ್ಪ ತಿಳಿಸಿ ಹೇಳಬೇಕು. 

ನನ್ನ ವಿಚಾರದಲ್ಲಿ ಈ ಅಂಶವನ್ನು ನಮ್ಮ ಹಿಂದು ಧರ್ಮದ ವಿಶೇಷತೆಯೆಂದು ಹೇಳಬಹುದು. ನಮ್ಮ ಪೂರ್ವಿಕರು ಮತ್ತು ಹಿರಿಯರು ಹೇಳುವದೆನೆಂದರೆ ದೇವಸ್ಥಾನವಿಲ್ಲದಿದ್ದರೂ ತೊಂದರೆಯಿಲ್ಲ, ಪೂಜಿಸುವ ಮೂರ್ತಿಯಿಲ್ಲದಿದ್ದರೂ ಪರವಾಗಿಲ್ಲ,  ನಾವು ಧಾರ್ಮಿಕ ಮತ್ತು ಆಧ್ಯಾತ್ಮಿಕವಾಗಿ ಬೆಳವಣಿಗೆ ಹೋ೦ದಬಹುದು ಎಂದು. ಇಷ್ಟಲಿಂಗ ಧರಿಸಿ ಕರಸ್ಥಲದಲ್ಲೇ ದೇವನನ್ನು ಪೂಜಿಸಬಹುದು ಎಂದು ಹೇಳಿದ್ದಾರೆ. ದೇವರು ಬೇಡ ಅವನ ಹಂಗೂ ಬೇಡ ಅವನ ನಾಮದ ಬಲವೊಂದಿದಿದ್ದರೆ ಸಾಕು ಎಂದಿದ್ದಾರೆ. ಬಾಲ ಪ್ರಹ್ಲಾದನ ಮೂಲಕ ದೇವರು ಎಲ್ಲೆಡೆಯೂ ಇರುವನು ಎಂದು ತೋರಿಸಿಕೊಟ್ಟಿದ್ದಾರೆ. ಇಷ್ಟಕ್ಕೂ ಇದೆಲ್ಲದರ ಅರ್ಥ, ದೇವರನ್ನು ನೀನು ಎಲ್ಲಿಯಾದರೂ ಕಾಣಬಹುದು ಮತ್ತು ನೀನೆಲ್ಲಿಯಿರುವೆಯೋ ಅಲ್ಲಿಯೇ ಅವನನ್ನು ಪೂಜಿಸು, ಭಜಿಸು ಎಂದು. ಅಂದರೆ ದೇವಸ್ಥಾನಕ್ಕೆ ಹೋಗಲೇಬೇಕು ಎನ್ನುವ ಅವಶ್ಯಕತೆಯೇನೂ ಇಲ್ಲ. ಇದು ನಮಗೆ ಕೊಟ್ಟ ಒಂದು ಸ್ವಾತಂತ್ರವಲ್ಲವೇ? ಇದು ನಮ್ಮ ಧರ್ಮದ ವಿಶೇಷತೆಯಲ್ಲವೇ? 


ಇದೆ ಅಂಶವನ್ನು ದೌರ್ಬಲ್ಯವೆಂದು ಯಾಕೆ ಹೇಳಬೇಕೆಂದರೆ ನಮ್ಮ ಧರ್ಮದಲ್ಲಿ ದೇವಸ್ಥಾನಕ್ಕೆ ಹೋಗಲೇಬೇಕು ಎಂದು ಯಾವುದೇ ಧಾರ್ಮಿಕ ಗುರು ಅಥವಾ ಸ್ವಾಮೀಜಿ ಅಥವಾ ಹಿರಿಯರು ಒತ್ತಾಯಿಸುವದಿಲ್ಲ. ಪ್ರಾರ್ಥನೆ ಕಡ್ಡಾಯವೆಂದು ನಿಯಮ ಹೇರುವದಿಲ್ಲ. ಶನಿವಾರ ಹನುಮನ ಗುಡಿಗೆ ಹೋಗಬೇಕು, ಸೋಮವಾರ ಶಿವಾಲಯಕ್ಕೆ ಹೋಗಲೇಬೇಕು ಎಂದು ಯಾರೂ ಕಟ್ಟಪ್ಪಣೆ ಹಾಕುವದಿಲ್ಲ. ಇದನ್ನೇ ಬಳಸಿಕೊಂಡು ನಮ್ಮ ಜನ ದೇವಸ್ಥಾನಕ್ಕೆ ಹೆಚ್ಚಾಗಿ ಹೋಗುವದಿಲ್ಲ. ಆದರೆ ನಾವು ದೇವಸ್ಥಾನಕ್ಕೆ ಹೋಗದೆಯಿದ್ದರೆ, ದೇವಸ್ಥಾನದ ಅಭಿವೃದ್ಧಿಯಾಗುವದಾದರು ಹೇಗೆ? ದೇವಸ್ಥಾನಗಳನ್ನು ಹಿಂದೆ ಯಾರೋ ಪುಣ್ಯಾತ್ಮರು ಕಟ್ಟಿಸಿರಬಹುದು ಆದರೆ ಅವುಗಳ ಇಂದಿನ ನಿರ್ವಹಣೆ ಮತ್ತು ಅಭಿವೃದ್ಧಿ ಸಾಗುವದು ಭಕ್ತಾದಿಗಳಿಂದ. ಭಕ್ತರು ದೇವಸ್ಥಾನಗಳಿಗೆ ಹೋಗಿ ಪೂಜೆ ಪುನಸ್ಕಾರಗಳ ಜೊತೆ ಕಾಣಿಕೆ ಮತ್ತು ಸೇವೆಗಳನ್ನು ಸಲ್ಲಿಸುವದರಿಂದ. ಕಾಣಿಕೆಯು ನಗ ನಾಣ್ಯಗಳಾಗಿರಬಹುದು ಅಥವಾ ದೇವಕಾರ್ಯಕ್ಕೆ ಉಪಯೋಗಿಸುವ ವಸ್ತುಗಳಾಗಿರಲೂಬಹುದು. ಇದೆಲ್ಲ ಇಲ್ಲದಿದ್ದರೆ ದೇವಸ್ಥಾನ ಬೆಳೆಯುವದಾದರೂ ಹೇಗೆ ಬೆಳೆಯುವದು ಬಿಡಿ ದಿನ ನಿತ್ಯದ ವಿಧಿ ವಿಧಾನಗಳನ್ನು ನಿರ್ವಹಿಸುವದು ಕಷ್ಟ. ಈ ರೀತಿಯಾಗಿ ವಿವೇಚಿಸಿದಾಗ ಇದು ಹಿಂದು ಧರ್ಮದ ದೌರ್ಬಲ್ಯವೆಂದು ಕಾಣಬಹುದಲ್ಲವೇ?


ಇಷ್ಟಕ್ಕೂ ನಾವು ದೇವಸ್ಥಾನಗಳನ್ನು ಯಾಕೆ ಬೆಳೆಸಬೇಕೆಂದರೆ, ಧರ್ಮವನ್ನು ರಕ್ಷಿಸುವಲ್ಲಿ ದೇವಸ್ಥಾನಗಳೇ ಮುಖ್ಯ ಪಾತ್ರವಹಿಸುತ್ತವೆ. ಇನ್ನು ಧರ್ಮ ರಕ್ಷಣೆಯಾಕಾಗಬೇಕು ಅಂದರೆ ಅದು ನಮ್ಮ ಸ್ವಂತ ರಕ್ಷಣೆಗೋಸ್ಕರವೇ ಹೊರತು ಬೇರೆಯೇನೂ ಅಲ್ಲ. ಯಾಕೆಂದರೆ "ಧರ್ಮೋ ರಕ್ಷತಿ ರಕ್ಷಿತ:" ಎಂದು ಸನಾತನಿಗಳು ಹೇಳಿದ್ದಾರೆ. ಅದಕ್ಕಾಗಿ ನಾನು ದೇವಸ್ಥಾನಕ್ಕೆ ಹೋಗುವದು ಕಡಿಮೆಯಾದರೂ ಕೂಡ, ಹೋದಾಗೊಮ್ಮೆ ಹುಂಡಿಗೆ ನನ್ನ ಕೈಲಾದಷ್ಟು ಕಾಣಿಕೆಯನ್ನು ಹಾಕಿಬರುತ್ತೇನೆ. ನಮ್ಮ ದೇವಸ್ಥಾನಗಳಿಗೆ ನಾವಲ್ಲದೇ ಬೇರಾರು ಸಹಾಯ ಮಾಡಿಯಾರು? ನೀವು ಕೂಡ ಕಾಣಿಕೆ ಹುಂಡಿಗೆ ನಿಮ್ಮ ಕೈಲಾದಷ್ಟು ಹಣವನ್ನು ಹಾಕಿರಿ. ಹುಂಡಿಯವರೆಗೆ ಬರುವಷ್ಟರಲ್ಲಿ ನನ್ನ ಮೂರನೆಯ ಪ್ರದಕ್ಷಿಣೆ ಮುಗಿಯಿತು.

6 comments:

  1. ಅಣ್ಣ ನಿಮ್ಮ ಈ ಮಿಂಬಲೆಗೆ ಬರಲು ಮೂಲ ದೂಸರು "ಮೂಕಜ್ಜಿಯ ಕನಸುಗಳು " ಆ ಹೊತ್ತಿಗೆ ಓದಿರೋ ನೀವು ಈಗೆ ಹೆಂಗೆ ಬರಿಯೋಕೆ ಸಾದ್ಯ ??? ಮೊದಲ ಎರಡು ಪ್ರದಕ್ಷಿಣೆ ಚನ್ನಾಗಿತ್ತು ... ಕೊನೆ ಪ್ರದಕ್ಷಿಣೆಗೆ ಉಲ್ಟಾ ಹೊಡೆದು ಬಿಟ್ಟಿರಿ .. ಹುಂಡಿ ಗೆ ದುಡ್ಡು ಹಾಕಿ ಅಂತ !!!!!! ನೀವು ಈ ಅಂಕಣದಲ್ಲಿ ಏನು ಹೇಳಲಿಕ್ಕೆ ಬಯಸುತಿದ್ದಿರಾ ?? ಒಸಿ ಬಿಡಿಸಿ ಹೇಳಿ ...... ಏನಾದ್ರು ತಪ್ಪು ಹೇಳಿದ್ದರೆ ಮನ್ನಿಸಬೇಕು

    ReplyDelete
    Replies
    1. ಹರ್ಷ ಅವರೇ
      ಅಣ್ಣಾ ಎಂದು ನನ್ನ ಸಂಭೋದಿಸಿ ನಿಮ್ಮ ಜಾಣತನದಿಂದ ನನ್ನ ಜವಾಬ್ದಾರಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವಿರೋ ಅಥವಾ ಇದು ನಿಮ್ಮ ಪ್ರಬುದ್ಧ ಮನಸ್ಸಿನ ಸಾಮಾನ್ಯ ಶೈಲಿಯೋ ಗೊತ್ತಾಗಲಿಲ್ಲ. ಅದೇನೇ ಇರಲಿ ನನ್ನ ಬರವಣಿಗೆ ಓದಿ ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ತುಂಬಾ ಧನ್ಯವಾದಗಳು. ನಾನು ಕಾರಂತರ ಮೂಕಜ್ಜಿಯ ಕನಸುಗಳನ್ನು ಓದಿರುವೆ ಆದರೆ ಇಲ್ಲಿ ನನ್ನ ಸ್ವಾನುಭವವನ್ನು ಮತ್ತು ಸ್ವಂತ ವಿಚಾರಗಳನ್ನು ಬರೆದಿರುವೆ. ಇಲ್ಲಿ ಆ ಮಹಾನ್ ಕೃತಿಗೆ ವಿರೋಧವಾಗುವ ಅಂಶಗಳು ಯಾವವು ಅಂತ ನನಗೆ ತಿಳಿಯಲಿಲ್ಲ.

      ನನ್ನ ಮೊದಲೆರಡು ಪ್ರದಕ್ಷಿಣೆಗಳು ನಿಮಗೆ ಇಷ್ಟವಾದದ್ದು ಸಂತೋಷ. ಅವೆರಡೂ ಪ್ರದಕ್ಷಿಣೆಗಳು ನಾನು ದೇವಸ್ಥಾನಗಳ ಬಗ್ಗೆ ಜನರ ಅಭಿಪ್ರಾಯ ಮತ್ತು ದೇವಸ್ಥಾನದ ಸ್ಥಿತಿಯನ್ನು ಕಂಡಂತೆ ಬರೆದದ್ದೇ ಹೊರತು ನನ್ನ ಸ್ವಂತ ವಿವೇಚನೆ ಏನೂ ಇಲ್ಲ. ನಾನು ಮೂರನೆಯ ಪ್ರದಕ್ಷಿಣೆಯಲ್ಲಿ ನನ್ನ ವಿಚಾರ ಮತ್ತು ನಿವೇದನೆಯನ್ನು ಪ್ರಸ್ತುತ ಪಡಿಸಿರುವೆ. ನಾನು ಹೇಳುವದಿಷ್ಟೇ, ನಾವು ದೇವಸ್ಥಾನಗಳನ್ನು ಉಳಿಸಿ ಬೆಳೆಸಬೇಕು, ಅದಕ್ಕೆ ಹುಂಡಿಗೆ ದುಡ್ಡು ಹಾಕಬೇಕು. ಇಲ್ಲಿ ಉಲ್ಟಾ ಹೊಡೆದ ಅಂಶ ಯಾವುದಾದರು ಇದ್ದರೇ ದಯಮಾಡಿ ತಿಳಿಸಿ, ನಾನು ಸರಿ ಮಾಡಿಕೊಳ್ಳಲು ಪ್ರಯತ್ನಿಸುವೆ.

      ನೀವು ಹೇಳಿದ್ದು ಯಾವುದು ತಪ್ಪು ಎಂದು ನಾನು ಭಾವಿಸಿಲ್ಲ, ನಿಮ್ಮ ವಿಮರ್ಶೆಗೆ ನಾನು ಋಣಿಯಾಗಿರುವೆ.

      Delete
  2. While the first two paragraphs were interesting read (including making me wonder why you'd not go against your mother and why you'd want to perpetuate blind-beliefs and not initiate a rational conversation and how it is common in almost all households and how we Indians do not brook any arguments), the last paragraph was a come-downer. I can't buy your argument on visiting temples and contributing to their hundis. More on that later, may be.

    ReplyDelete
    Replies
    1. I dont want to go against my mother, because she is my mother. And its not like that I always follow my mother, sometimes I do oppose her.

      There are few things which may not be of our interest but they make others happy. So why to think more about it, compromise a little and just do it for others, anyways I am not at the big loss but gained mothers happiness.

      Delete
  3. While the first two paragraphs made interesting reading and also provoked thoughts and made me hark back to my own relationship with my parents, the last paragraph (on why we must contribute to temples) was disappointing, to say the least.

    I wondered why we Indians (and not just you) always refuse to argue against blind-beliefs and how we perpetuate them by not standing up against them, and thereby deny change in the society. The corollary is we collectively are averse to argument and prefer dogma.

    The reasons why I don't agree with your last pradakshine are:
    a) We already have huge number of temples and we don't need to encourage building of new ones
    b) We are more interested in our own greed when we visit temples than either praying to the Lord/Devi or preserving our heritage or culture; one visit to temples where you're just observing people would make you aware of this.
    c) Each day more temples are coming up and more people are blindly going to them for fulfillment of one selfish desire or the other (most times which may also be anti-social, like a doc going and praying for more patients at his nursing home).

    There is a lot that I might want to say in this regard, but would stop here.

    ReplyDelete
  4. Thank you Sudhir for your comment. I am happy that my first two ಪ್ರದಕ್ಷಿಣೆಗಳು created interest to read further. Dont take the third ಪ್ರದಕ್ಷಿಣೆ as disappointing.

    I am also against blind beliefs of any religion. But let me make two points here,
    1) There are many customs in Hindu religion which are not blind beleifs but are scientifically strong rituals to strengthen our daily life.
    2) Putting money in temple hundi, is not blind beleif, this custom is meant to raise the fund for development of temple.

    Now coming to your points
    a) There are no new Hindu temple building in recent years, but I have seen other religion temples are growing in all around. And if at all Hindu temples growing, they are not harmful for the society.
    b) You are talking about greed, yes we visit to god for asking something, I agree that. But to get what we want, we pray for it.
    c) Its natural that a doctor prays for more patient and a patient prays for good health. Its very natural like a lion prays for healthy deer and deer prays for safe life

    ReplyDelete